ಕುಕ್ಕು ವಿತ್ ಚಿಕ್ಕುಗೆ ಸ್ವಾಗತ, ಸುಸ್ವಾಗತ!
ನಾನು ಆರಾಧ್ಯ.
ನನ್ನ ಈ ಚಾನಲ್‌ನಲ್ಲಿ ಎಲ್ಲಾ ಅಡುಗೆಗಳನ್ನು ನಾನು ಸ್ವತಃ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನನ್ನ ಬಗ್ಗೆ ಕಿರು ಪರಿಚಯ ಹೇಳಬೇಕಾದರೆ, ನಾನು ಮೂಲತಃ ಕೋಲಾರ ಜಿಲ್ಲೆಯವಳು. ಆದ್ದರಿಂದ ನನ್ನ ರೆಸಿಪಿಗಳಲ್ಲಿ ಸುಮಾರು 80% ರೆಸಿಪಿಗಳು ಕೋಲಾರದ ಸಾಂಪ್ರದಾಯಿಕ ರುಚಿಯನ್ನು ಹೊಂದಿರುತ್ತವೆ. ಈಗ ನಾನು ಬೆಂಗಳೂರುದಲ್ಲಿ ವಾಸಿಸುತ್ತಿದ್ದೇನೆ.
ಎಲ್ಲರ ಹಾಗೆಯೇ ನನಗೂ ಮದುವೆಯ ಮೊದಲು ಅಡುಗೆ ಮಾಡುವ ಅನುಭವ ಇರಲಿಲ್ಲ. ನಾನು ಅಮ್ಮನಿಗೆ ಸಹಾಯ ಮಾಡುತ್ತಿದ್ದವರಲ್ಲ, ಅಷ್ಟೇ ಅಲ್ಲ ಅನ್ನ ಮಾಡುವುದೂ ನನಗೆ ಬರಲಿಲ್ಲ. ಮದುವೆಯಾದ ನಂತರ ನಾನು ನಿಧಾನವಾಗಿ ಅಡುಗೆ ಕಲಿಯಲು ಪ್ರಾರಂಭಿಸಿದೆ. ಮೊದಲು ಅಡುಗೆ ಮಾಡುವಾಗ ಕೆಲವು ಬಾರಿ ಅಡುಗೆಗಳು ಕೆಡುತ್ತಿದ್ದವು. ಆಗ ನಾನು ನನ್ನ ಅಮ್ಮನನ್ನು ಕೇಳಿ ವಿವಿಧ ಅಡುಗೆಗಳನ್ನು ಹೇಗೆ ಮಾಡುವುದು ಎಂದು ತಿಳಿದುಕೊಂಡೆ. ಅಮ್ಮ ಹೇಳಿದ ಅಳತೆಗಳು ಮತ್ತು ವಿಧಾನಗಳನ್ನು ಅನುಸರಿಸಿ ನಾನು ಅಡುಗೆ ಮಾಡತೊಡಗಿದೆ.
ದಿನದಿಂದ ದಿನಕ್ಕೆ ನನ್ನ ಅಡುಗೆಗಳಲ್ಲಿ ಬದಲಾವಣೆ ಕಂಡುಬಂತು. ಆಗ ನನಗೆ ಅರ್ಥವಾದ ಒಂದು ಪ್ರಮುಖ ವಿಷಯ ಎಂದರೆ ಅಡುಗೆ ಮಾಡುವಾಗ ಪ್ರೀತಿಯಿಂದ ಮತ್ತು ಆಸಕ್ತಿಯಿಂದ ಮಾಡಬೇಕು. ಮನಸ್ಸಿಟ್ಟು ಮಾಡಿದ ಅಡುಗೆ ಯಾವಾಗಲೂ ರುಚಿಯಾಗಿರುತ್ತದೆ.
ಈ ಆಸಕ್ತಿಯಿಂದಲೇ ನಾನು Instagram ನಲ್ಲಿ ನನ್ನ ಅಡುಗೆ ಪೇಜ್ ಆರಂಭಿಸುವ ಯೋಚನೆ ಮಾಡಿದೆ.ಈ ಪ್ರಯಾಣದಲ್ಲಿ ಇಂದು ನನ್ನ ಜೊತೆಗೆ 60,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅದು ನನಗೆ ತುಂಬಾ ಹೆಮ್ಮೆಯ ವಿಷಯ ಮತ್ತು ಸಂತೋಷದ ವಿಷಯವೂ ಹೌದು. ನನಗೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಿದ ನನ್ನ ಎಲ್ಲಾ ಫಾಲೋವರ್ಸ್‌ಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ನಿಮಗೂ ಕೂಡ ಅಡುಗೆ ಮಾಡಲು ಕಷ್ಟವಾಗುತ್ತದೆಯೇ? ಚಿಂತಿಸಬೇಕಿಲ್ಲ. ನಾನು ನನ್ನ ಪೇಜ್‌ನಲ್ಲಿ ತುಂಬಾ ಸರಳವಾಗಿ ಮತ್ತು ಸ್ಟೆಪ್-ಬೈ-ಸ್ಟೆಪ್ ರೀತಿಯಲ್ಲಿ ರೆಸಿಪಿಗಳನ್ನು ಬರೆಯುತ್ತೇನೆ. ನೀವು ಓದಿ, ಅನುಸರಿಸಿ ಸುಲಭವಾಗಿ ಅಡುಗೆ ಕಲಿಯಬಹುದು. ಜೊತೆಗೆ ಕೆಲವು ಉಪಯುಕ್ತ ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತೇನೆ, ನಾನು ಮಾಡಿದ ತಪ್ಪುಗಳನ್ನು ನೀವು ಮಾಡಬಾರದೆಂದು.
ಧನ್ಯವಾದಗಳು. ❤️